Horizontal Menu

Drop Down MenusCSS Drop Down MenuPure CSS Dropdown Menu

Wednesday 11 May 2016

ಹಿರಿಯ ಸ್ನೇಹಿತರಾದ ಮೂರ್ತಿ ದೇರಾಜೆಯವರ ಪೂರ್ತಿ ಹೆಸರು ಏನೆಂದು ನನಗೆ ಗೊತ್ತಿಲ್ಲಆದರೆ ಅವರ ಸಣ್ಣ ಶರೀರವನ್ನುನೋಡಿದರೆ ಅವರಿಗೆ ಮೂರ್ತಿ ಎನ್ನುವ ಹೆಸರೇ ಸಾಕೆನಿಸುತ್ತದೆಮಕ್ಕಳೊಂದಿಗೆ ಅವರದೇ ಮಟ್ಟದಲ್ಲಿ ವ್ಯವಹರಿಸುವಮೂರ್ತಿಯವರ ಶಕ್ತಿಗೆ ಅವರ ಚಿಕ್ಕದಾದ ಆದರೆ ಮೊನಚಾದ ನಿಲುಮೆ ಒಂದು ಸಂಕೇತ ಮಾತ್ರಅವರು ದೇರಾಜೆಸೀತಾರಾಮಯ್ಯನವರ ಮಗ ಎನ್ನುವುದು ಅವರ ವ್ಯಕ್ತಿತ್ವದ ಮಿತಿಯಲ್ಲ ಒಂದು ಆಯಾಮವಷ್ಟೆ. ಮೂರ್ತಿ ದೇರಾಜೆ ಮತ್ತು ಶಂಕರ ಪ್ರಸಾದರು ಸಮಾನ ಆಸಕ್ತರೊಂದಿಗೆ ಕಟ್ಟಿದ ತಂಡ ಸಮಸಾಂಪ್ರತಿ.
ಮೂರ್ತಿ ದೇರಾಜೆಯವರಿಂದ ಪೀಠಿಕೆ 

Monday 2 March 2015

ಹುಟ್ಟೂರ ಸನ್ಮಾನದಲ್ಲಿ ಕಾರಂತರ ಭಾಷಣ

'It is never too late' ಎಂದೊಂದು ಮಾತಿದೆ. ಅದರಂತೆ ಬಿವಿಕಾರಂತರೆಂಬ ರಂಗಸೂರ್ಯ ಇಡಿಯ ಭಾರತವನ್ನು ಹೊಸ ನೇಸರಿನಲ್ಲಿ ಮುಳುಗೇಳಿಸಿದ ಬಳಿಕ ಸ್ವಲ್ಪ ತಡವಾಗಿಯಾದರೂ ಅವರ ಹುಟ್ಟೂರಿನವರಾದ ನಾವೆಲ್ಲರೂ ಅವರನ್ನು ಕರೆಯಿಸಿ ಅವರಿಗೊಂದು ಹೃದಯಸ್ಪರ್ಶಿ ಸನ್ಮಾನವನ್ನು ಮಾಡಿದುದು ಈಗ ಇತಿಹಾಸವಷ್ಟೆ. ಆ ಸಂದರ್ಭದಲ್ಲಿ ಅವರು ಮಾಡಿದ ಭಾಷಣದ ಧ್ವನಿ ಮುದ್ರಿತ ಪ್ರತಿ ಇಲ್ಲದಿದ್ದರೂ‌ ಶ್ರೀಮತಿ ಡಾ ವಿದ್ಯಾ ಮನೋಹರ ಉಪಾಧ್ಯ ಅವರು ಅದನ್ನು ಆಲಿಸಿ ಬರಹರೂಪಕ್ಕಿಳಿಸಿದ ಸಂಗ್ರಹ ರೂಪ ಉಳಿದುಕೊಂಡಿದೆ. ಅದನ್ನು ಇಲ್ಲಿ ಪ್ರಸ್ತುತ ಪಡಿಸಲಾಗಿದೆ.