Horizontal Menu

Drop Down MenusCSS Drop Down MenuPure CSS Dropdown Menu

Wednesday 11 May 2016

ಹಿರಿಯ ಸ್ನೇಹಿತರಾದ ಮೂರ್ತಿ ದೇರಾಜೆಯವರ ಪೂರ್ತಿ ಹೆಸರು ಏನೆಂದು ನನಗೆ ಗೊತ್ತಿಲ್ಲಆದರೆ ಅವರ ಸಣ್ಣ ಶರೀರವನ್ನುನೋಡಿದರೆ ಅವರಿಗೆ ಮೂರ್ತಿ ಎನ್ನುವ ಹೆಸರೇ ಸಾಕೆನಿಸುತ್ತದೆಮಕ್ಕಳೊಂದಿಗೆ ಅವರದೇ ಮಟ್ಟದಲ್ಲಿ ವ್ಯವಹರಿಸುವಮೂರ್ತಿಯವರ ಶಕ್ತಿಗೆ ಅವರ ಚಿಕ್ಕದಾದ ಆದರೆ ಮೊನಚಾದ ನಿಲುಮೆ ಒಂದು ಸಂಕೇತ ಮಾತ್ರಅವರು ದೇರಾಜೆಸೀತಾರಾಮಯ್ಯನವರ ಮಗ ಎನ್ನುವುದು ಅವರ ವ್ಯಕ್ತಿತ್ವದ ಮಿತಿಯಲ್ಲ ಒಂದು ಆಯಾಮವಷ್ಟೆ. ಮೂರ್ತಿ ದೇರಾಜೆ ಮತ್ತು ಶಂಕರ ಪ್ರಸಾದರು ಸಮಾನ ಆಸಕ್ತರೊಂದಿಗೆ ಕಟ್ಟಿದ ತಂಡ ಸಮಸಾಂಪ್ರತಿ.
ಮೂರ್ತಿ ದೇರಾಜೆಯವರಿಂದ ಪೀಠಿಕೆ 


 ಸಮಸಾಂಪ್ರತಿ ತಂಡವು ವಿನ್ಯಾಸಗೊಳಿಸಿದ  ’ಕಪ್ಪು ಕಾಗೆಯ ಹಾಡು’ ನಾಟಕವನ್ನು ನೋಡಿದ್ದಕ್ಕಿಂತ ಹೆಚ್ಚಾಗಿ ಅದರ ರಿಹರ್ಸಲ್ನೋಡಿದ್ದಕ್ಕೆ ನಾನು  ಬರಹವನ್ನು ಬರೆಯಬೇಕಾಗಿ ಬಂತುಒಂದರಿಂದ ಏಳನೇ ತರಗತಿಯವರೆಗಿನ 75 ಮಕ್ಕಳೊಂದಿಗೆಎಪ್ರಿಲ್  36 ಡಿಗ್ರಿಗೂ ಮೀರಿದ ಬಿಸಿಲಿನಲ್ಲಿ ಮಕ್ಕಳು ಮತ್ತು ಸಮಸಾಂಪ್ರತಿ ತಂಡ ಅಕ್ಷರಶಹುರಿಸಿಕೊಳ್ಳುತ್ತಿದ್ದರು
ಬೆಳಗಿನ ಅಭ್ಯಾಸ 


ಅಭ್ಯಾಸ ೨

ಅದೇ ರಾತ್ರಿಸಾರ್ವಜನಿಕವಾಗಿ ಪ್ರದರ್ಶನಗೊಂಡು ನೋಡುಗರ ಮನಸೂರೆಗೊಂಡ ನಾಟಕ ಹೆಕ್ಕಿ ಆಯ್ದುಕೊಂಡ ಬಾಲಕಲಾವಿದರಿಂದಮಾಡಿಸಿದ್ದಲ್ಲಆದರೆಮಕ್ಕಳು ವೇದಿಕೆಯೆದುರು ಯಾರೂ ಕುಳಿತೇ ಇಲ್ಲ ಎನ್ನುವ ಹಾಗೆಸುಮ್ಮನೆ ತಮ್ಮತಮ್ಮಲ್ಲಿ ಸಹಜವಾಗಿಮಾತನಾಡಿದ ಹಾಗೆ ವಿವಿಧ ಹಕ್ಕಿಗಳ ಭಾಷೆಯಲ್ಲಿ ನಾಟಕದ ಕಥೆಯನ್ನು ಕಟ್ಟುತ್ತಿದ್ದರುಇದರ ಹಿಂದಿನ ಸೂತ್ರ ನೋಡಲು ಸರಳಆದರೆ ಅನುಸರಣೆಗೆ ಕಠಿಣವಾದದ್ದುಯಾವುದೇ ನೈಜ ಸಾಧಕನಿಗೆ (ಮಾತ್ರ) ಒಲಿಯುವಂಥದ್ದು.

ಪ್ರಕ್ರಿಯೆ (ಪ್ರಾಸೆಸ್ಸರಿಯಾಗಿದ್ದರೆ ಪ್ರದರ್ಶನ (ಪ್ರಾಡಕ್ಟ್ಸರಿಯಾಗಿರುತ್ತದೆ’ ಎಂಬುದು ಅವರ ಸೂತ್ರದೇರಾಜೆಯವರಿಗೆಪ್ರದರ್ಶನ ಉದ್ದೇಶವಲ್ಲಹಿಂದೆ ಮುಳಿಯ ಶಾಲೆಯಲ್ಲಿ ಯಾವುದೇ ಪ್ರದರ್ಶನದ ಗುರಿಯಿಲ್ಲದೆ ಸುಮ್ಮನೆ ಆಗಾಗ ಬಂದುಮಕ್ಕಳೊಂದಿಗೆ ನಾಟಕದ ಅಭ್ಯಾಸ ಮಾಡಿದ ಉದಾಹರಣೆ ಅವರು ’ಪ್ರಕ್ರಿಯೆಗೆ ಕೊಡುವ ಮಹತ್ವಕ್ಕೆ ಸಾಕ್ಷಿಶಾಲಾದಿನಗಳಲ್ಲಿಹೆಚ್ಚಾಗಿ ನಾವೆಲ್ಲ ಪುಸ್ತಕ ನೋಡಿ ನಾಟಕದ ಡೈಲಾಗ್ ಗಳನ್ನು ಉರುಹೊಡೆದು ರಿಹರ್ಸಲ್ ವೇಳೆಗೆ ಒಪ್ಪಿಸುತ್ತಿದ್ದುದನ್ನುನೆನಪಿಸಿಕೊಳ್ಳಿಅದಕ್ಕಿಂತ ಭಿನ್ನವಾಗಿಮೊದಲು ಮಕ್ಕಳಿಗೆ ಕಥೆ ಹೇಳುವುದುಆಯಾಯ ಸನ್ನಿವೇಶದಲ್ಲಿ ಆಡಬೇಕಾದಮಾತುಗಳನ್ನು ಅವರೊಳಗಿನಿಂದಲೇ ಹೊರಡಿಸುವುದುಅದನ್ನು ಸ್ವಲ್ಪ ತಿದ್ದಿ ತೀಡಿ ಸಹಜ ಆಡುಭಾಷೆಯರೂಪಕೊಡುವುದು ಇವರ ವಿಧಾನಪ್ರದರ್ಶನದ ದಿನ ಮಕ್ಕಳು ಯಾವುದೇ ಪಾತ್ರವನ್ನು ಕೊಟ್ಟರೂ ಆಡಬಲ್ಲರುಇದನ್ನುಮಕ್ಕಳೇ ಪ್ರದರ್ಶನದ ಕೊನೆಗೆ ನಡೆದ ಸಂವಾದದಲ್ಲಿ ಧೈರ್ಯವಾಗಿ ಹೇಳಿಕೊಂಡರುಉದ್ದೇಶಿತ ನಾಟಕದ ಮೊದಲು ಹತ್ತಾರುಸಣ್ಣಪುಟ್ಟ ನಾಟಕಗಳನ್ನು ಬರಿಯ ಅಭ್ಯಾಸಕ್ಕೆಆಡುವ ಸುಖಕ್ಕೆ ಆಡಿಸಿಮಕ್ಕಳನ್ನು  ಸಹಜ-ನಾಟಕದ ದಾರಿಗೆ ಒಗ್ಗಿಸುವಅವರ ವಿಧಾನ ತುಂಬ ಸಮಯ ಬೇಡುವಂಥದ್ದು.

ನಾಟಕವು ವೇದಿಕೆಯೆಂಬ ಬೇಲಿಯೊಳಗೆ ನಡೆಯಬೇಕಾಗಿಲ್ಲವೆಂದು ದೃಶ್ಯಗಳನ್ನು ವೇದಿಕೆಯ ಸುತ್ತುಮುತ್ತಲ ತಗ್ಗುದಿಣ್ಣೆಗಳಲ್ಲೆಲ್ಲಹಂಚಿಕತ್ತಲೆ/ಬೆಳಕು/ಧ್ವನಿ ನಿಯಂತ್ರಣದಿಂದ ಪ್ರೇಕ್ಷಕನ ಕಣ್ಣು ಮತ್ತು ಮನಸ್ಸುಗಳನ್ನು ಸೂತ್ರದ ಗೊಂಬೆಯನ್ನು ಕುಣಿಸಿದಂತೆಕುಣಿಸುವುದು ಈ ತಂಡಕ್ಕೆ ಸಿದ್ಧಿಯಾದ ನೈಪುಣ್ಯ. ಆದರೆ ಇದಕ್ಕಾಗಿ ಮಾಡಬೇಕಾದ ಸಿದ್ಧತೆ ಪರದೆಬೆಳಕುಧ್ವನಿವಯರಿಂಗ್ಇತ್ಯಾದಿ ಕೆಲಸಗಳು ಹತ್ತಾರು ಪಟ್ಟು ಹೆಚ್ಚು.  ಒಂದು ಗಂಟೆಯ ಪ್ರದರ್ಶನಕ್ಕಾಗಿ ದಿನಗಟ್ಟಲೆ ಸಮಯ ಬೇಡುವ ತಯಾರಿ ಮತ್ತುಬಿಚ್ಚಿ ಒಯ್ಯುವ ಶ್ರಮವನ್ನು ಉಣೊಡಾಂಡ ಬೆನೊಡು (ಪ್ರದರ್ಶನದ ಊಟವನ್ನು ಉಣ್ಣಬೇಕಾದರೆ  ಕೆಲಸವನ್ನುಮಾಡಲೇಬೇಕುಎಂದು ಬದ್ಧತೆಯಿಂದ ಮಾಡುತ್ತಾರೆನಾಟಕದ ಪದ್ಯಗಳ ರಚನೆ, ಸಂಗೀತ ನಿರ್ದೇಶನ, ಗಾಯನ, ಹಿನ್ನೆಲೆ ವಾದ್ಯಗಳ ವಾದನ, ಬೆಳಕಿನ ವಿನ್ಯಾಸ ಎಲ್ಲವನ್ನೂ ಸಮಸಾಂಪ್ರತಿ ತಂಡವೇ ಮಾಡಿದೆ. 

ಮೊನ್ನೆ ರವಿವಾರ ಮಂಚಿಯಲ್ಲಿ ಕೂದಲು ಕತ್ತರಿಸಿಕೊಳ್ಳಲು ಕುಳಿತಿದ್ದಾಗ ನಾಟಕ ನೋಡಿದ್ದ ಕ್ಷೌರಿಕ ಲೋಕೇಶ, ನಾಟಕ ಬಹಳ ಚೆನ್ನಾಗಿತ್ತೆಂದು ಹೊಗಳಿದ್ದು ನಾಟಕಕ್ಕೆ ಸಿಕ್ಕಿದ ನಿಜವಾದ ವಿಮರ್ಶೆಯೆಂದು ನನಗನಿಸಿತು.

ನಾಟಕ ಆಡಿದ ಹಳ್ಳಿಯ ಕನ್ನಡಶಾಲೆಯ ಮಕ್ಕಳು  ಅಭ್ಯಾಸದ ಬಳಿಕ ಹೊಸ ಧೈರ್ಯಉರುಹೊಡೆಯದೆ ಕಥೆ/ಪಾಠಗಳನ್ನುರಚಿಸುವ ಹೊಸಶಕ್ತಿಯನ್ನು ರೂಡಿಸಿಕೊಳ್ಳುವುದು ಖಚಿತಈ ನಾಟಕ ಮಕ್ಕಳ ಮುಂದಿನ ಬೆಳವಣಿಗೆಗೆ, ಹೂ ಅರಳಿದಂತೆ ತಮ್ಮಿಷ್ಟದಂತೆ ಮುಂದಿನ ಅವರ ಅರಳುವಿಕೆಗೆ ತುಂಬಾ ಸಹಕಾರಿಯಾಗಬಲ್ಲುದೆಂದು ನನಗನಿಸಿದೆ.

ಮಕ್ಕಳಿಗೆ ರಂಗತರಬೇತಿ ಕೊಡಬೇಕೆಂಬ ದೊಡ್ಡ ಕನಸನ್ನು ಹೊತ್ತು, ಅದರ ಸಾಕಾರಕ್ಕೆ ಶ್ರಮಿಸುತ್ತಿರುವ 'ಬಿ.ವಿ.ಕಾರಂತ ರಂಗಶಾಲೆ' ಮಾತೃಸಂಸ್ಥೆ  'ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್' ನ ಕೂಸು. 


ಬಿ.ವಿ ಕಾರಂತ ನೆನಪಿನ ಮಂಚಿ ನಾಟಕೋತ್ಸವ 2016 ಲ್ಲಿ ನೂಜಿಬೈಲು ಶಾಲೆಯ ಮಕ್ಕಳು ಆಡಿದ ಈ ನಾಟಕಕಿಕ್ಕಿರಿದು ತುಂಬಿದಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಅರ್ಹವಾಯಿತು.

No comments:

Post a Comment